ರೀತ್ ಅಬ್ರಹಾಂ ಅವರು ಬೆಂಗಳೂರಿನ ಕ್ರೀಡಾಪಟು. ಇವರು ಲಾಂಗ್ ಜಂಪ್ ಹಾಗು ೧೦೦ ಮೀಟರ್ ಹರ್ಡಲ್ಸ್‌ನಲ್ಲಿ ಏಷ್ಯಾದ ಮಾಜಿ ಪದಕ ವಿಜೇತೆ ಮತ್ತು ಹೆಪ್ಟಾಥ್ಲಾನ್‌ನಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್. ೧೯೯೭ ರಲ್ಲಿ ಅರ್ಜುನ ಪ್ರಶಸ್ತಿ ಮತ್ತು ೧೯೮೩ ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ. ಅತ್ಲೆಟಿಕ್ ಅಲ್ಲಿ ರೀತ್ ಅವರು ೧೫ ವರ್ಷಗಳ (೧೯೭೬–೧೯೯೨) ವೃತ್ತಿಜೀವನದ ಅನುಭವವನ್ನು ಹೊಂದಿದ್ದಾರೆ. ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಅವರು ೧೬ ಚಿನ್ನ ಮತ್ತು ೧೧ ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ರೀತ್ ಅವರು ಸದ್ಯ ಸಕ್ರಿಯ ಕ್ರೀಡಾಪಟು ಮತ್ತು ವಿಶ್ವ ಮಾಸ್ಟರ್ಸ್ ಸ್ಪರ್ಧೆಗಳಲ್ಲಿ ನಿಯತವಾಗಿ ಸ್ಪರ್ಧಿಸುತ್ತಾರೆ ಮತ್ತು ಪದಕಗಳನ್ನು ಗೆಲ್ಲುತ್ತಿದ್ದಾರೆ. ಪ್ರಸ್ತುತ ತಮ್ಮ ವಯಸ್ಸಿನ ವಿಭಾಗದಲ್ಲಿ ಟ್ರಿಪಲ್ ಜಂಪ್‌ನಲ್ಲಿ ವಿಶ್ವ ಮತ್ತು ಏಷ್ಯನ್ ಮಾಸ್ಟರ್ಸ್ ಚಾಂಪಿಯನ್ ಆಗಿದ್ದಾರೆ. ಅವರು ಕ್ಲೀನ್ ಸ್ಪೋರ್ಟ್ಸ್ ಇಂಡಿಯಾದ ಸಹ-ಸಂಸ್ಥಾಪಕರಾಗಿದ್ದಾರೆ. ಜನರ ಸಕ್ರಿಯ ಜೀವನಶೈಲಿಯಲ್ಲಿ ಯುಕ್ತತೆಯನ್ನು ಉತ್ತೇಜಿಸುವಲ್ಲಿ ಅವರು ತುಂಬಾ ಸಕ್ರಿಯರಾಗಿದ್ದಾರೆ. ಭಾರತದಲ್ಲಿ ವಿವಿಧ ಓಟ ಸ್ಪರ್ಧೆಗಳು ಮತ್ತು ಮ್ಯಾರಥಾನ್‌ಗಳನ್ನು ಅವರು ಸಕ್ರಿಯವಾಗಿ ಉತ್ತೇಜಿಸುತ್ತಾರೆ. ಅವರು ೨೦೧೪ರಿಂದ ಬೆಂಗಳೂರಿನ ಏಕೈಕ ಮ್ಯಾರಥಾನ್ - ಶ್ರೀರಾಮ್ ಪ್ರಾಪರ್ಟೀಸ್ ಬೆಂಗಳೂರು ಮ್ಯಾರಥಾನ್‌ನ ರಾಯಭಾರಿಯಾಗಿದ್ದಾರೆ. ಪ್ರಸ್ತುತ ಅವರು ಎನ್ಇಬಿ ಸ್ಪೋರ್ಟ್ಸ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾಗಿದ್ದಾರೆ. == ವೈಯಕ್ತಿಕ ಜೀವನ == == ವೃತ್ತಿ == ೧೫ ವರ್ಷಗಳ (೧೯೭೬–೧೯೯೨) ಸುದೀರ್ಘವಾದ ಅಥ್ಲೆಟಿಕ್ ವೃತ್ತಿಜೀವನದ ಅವಧಿಯಲ್ಲಿ ರೀತ್ ಅವರು ಕರ್ನಾಟಕ ರಾಜ್ಯ ಮತ್ತು ಭಾರತವನ್ನು ಹಲವಾರು ಸಂದರ್ಭಗಳಲ್ಲಿ ಪ್ರತಿನಿಧಿಸುತ್ತಾ ದಾರಿಯುದ್ದಕ್ಕೂ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರ ಎಲ್ಲಾ ಸಾಧನೆಗಳು ಅವರ ಸಮರ್ಪಿಸಿಕೊಳ್ಳುವಿಕೆ, ಅನ್ವಯಿಸುವಿಕೆ ಮತ್ತು ಶಿಸ್ತಿನ ಪ್ರಜ್ಞೆಯ ಪರಿಣಾಮಗಳಾಗಿವೆ. == ಇದನ್ನೂ ನೋಡಿ == ಭಾರತೀಯ ಮಹಿಳಾ ಕ್ರೀಡಾಪಟುಗಳ ಪಟ್ಟಿ == ಉಲ್ಲೇಖಗಳು == == ಬಾಹ್ಯ ಲಿಂಕ್‌ಗಳು ==